ಶಾಲಾ ಮಾಹಿತಿ

ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ, ಕೊಪ್ಪಳ

ಶ್ರೀ ಗುರುವೆ ಸತ್ ಕ್ರಿಯಾಗರವೇ ಸುಜ್ಞಾನ ಸಾಗರವೇ ಎನ್ನ ಮತಿಗೆ ಮಂಗಳವಿತ್ತು ರಾಗದಿಂ ಬೇಗ ಕೃಪೆಯಾಗು.ದಯಾ ಘನನಾದ ಕೊಪ್ಪಳ ನಾಡಿನ ಆದಿದೇವತೆ ಶ್ರೀ ಗವಿಸಿದ್ಧೇಶ್ವರನನ್ನು ಸ್ಮರಿಸಿಕೊಂಡು ಪರಮ ಪೂಜ್ಯ ಮನ್ ನಿರಂಜನ ಜಗದ್ಗುರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಪಾದಗಳಲ್ಲಿ ನಮಸ್ಕರಿಸಿ ಈ ಪ್ರೌಢ ಶಾಲೆ ಜೂನ್-16 1951 ರಲ್ಲಿ ಶ್ರೀ ಮನ್ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಸತ್ ಸಂಕಲ್ಪ ಹಾಗೂ ಕೃಪಾಶೀವರ್ಾದದಿಂದ ಪ್ರಾರಂಭಗೊಂಡಿತು.
ಈ ಭಾಗದಲ್ಲಿ ಆಗ ಅಕ್ಷರ ಜ್ಞಾನ ಉಳ್ಳವರು ತುಂಬ ಕಡಿಮೆ ಎಲ್ಲಿಯೂ ಸರಕಾರಿ ಶಾಲೆಗಳಿರಲಿಲ್ಲ. ಊರಿನಲ್ಲಿ ಅಯ್ಯನವರು ನಡೆಸುತ್ತಿದ್ದ ಗಾವಠಿ ಶಾಲೆಗಳೇ ಆಧಾರವಾಗಿದ್ದವು. ಕೆಲವೊಂದು ಕಡೆಗೆ ಅವು ಇಲ್ಲದೆ ಒಂದು ಊರಿಗೆ ಬಂದ ಪತ್ರವನ್ನು ಓದಿಸಲು ಇನ್ನೊಂದು ಊರಿಗೆ ಹೋಗಬೇಕಾಗಿತ್ತು.ಇಂತಹ ಅಕ್ಷರಬರದ ನಾಡಿನಲ್ಲಿ ವಿದ್ಯೆಯ ಪ್ರಸಾರಕ್ಕೆ ಶ್ರೀ ಗವಿಸಿದ್ಧೇಶ್ವರ ಮಿಡ್ಲ ಸ್ಕೂಲ್ ಆರಂಭಗೊಂಡಿದ್ದು ಶ್ರೀ ಗವಿಸಿದ್ಧೇಶ್ವರನ ಆಶೀವರ್ಾದವೇ ಕಾರಣ.

ಕೊಪ್ಪಳದ ಜವಾಹರ ರಸ್ತೆಯ ಬಾಖರ ಮಿಯಾ ಅವರ ಕಟ್ಟಡದಲ್ಲಿ ಮೊದಲಿಗೆ ಶಾಲೆ ಆರಂಭಗೊಂಡಿತು. ಪೂಜ್ಯ ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಕೃಪಾದೃಷ್ಠಿ ತರುಣರು, ಉತ್ಸಾಹಶಾಲಿಗಳು ಹಾಗೂ ಒಳ್ಳೆಯ ಪಾಂಡಿತ್ಯವನ್ನು ಹೊಂದಿದ ಶಿಕ್ಷಕರ ಪ್ರಯತ್ನ ಹಾಗೂ ಸಾರ್ವಜನಿಕರ ಸಹಾಯ, ಸಹಕಾರಗಳೊಂದಿಗೆ ಹೆಚ್ಚುತ್ತಿರುವ ವಿದ್ಯಾಥರ್ಿಗಳ ಸಂಖ್ಯೆಯಿಂದಾಗಿ ಕಟ್ಟಡ ಸಾಲದಾಗಲು ಶ್ರಿ ಗವಿಮಠದ ಆವರಣದಲ್ಲಿರುವ ಜ್ಞಾನ ಮಂಟಪಕ್ಕೆ 1954 ರಲ್ಲಿ ಶಾಲೆ ಸ್ಥಳಾಂತರಗೊಂಡಿತು.

ಶ್ರಿ ಗವಿಮಠದ ಪವಿತ್ರ ವಾತಾವರಣ ಪೂಜ್ಯ ಶ್ರೀಗಳವರ ಕೃಪಾ ದೃಷ್ಠಿ ಶಿಕ್ಷಕರ ಅವಿರತ ಪರಿಶ್ರಮ ವಿಧೇಯ ವಿಧ್ಯಾಥರ್ಿಗಳ ಓದಿನಿಂದ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆಯಿತು. ಇಷ್ಟರಲ್ಲಿಯೇ ಪರಮಪೂಜ್ಯ ಲಿಂಗೈಕ್ಯ ಮರಿಶಾಂತವೀರ ಮಹಾಸ್ವಾಮಿಗಳ ಆಶೀವರ್ಾದದಿಂದ ವ್ಯವಸ್ಥಾಪಕ ಆಡಳಿತ ಮಂಡಳಿಯವರ ಪರಿಶ್ರಮದಿಂದ ಈಗಿರುವ ಬೃಹತ್ ಕಲ್ಲಿನ ಕಟ್ಟಡ 1953ರಲ್ಲಿ ಶಂಕು ಸ್ಥಾಪನೆ ನೆರವೇರಿಸಲ್ಪಟ್ಟು 1960 ರಲ್ಲಿ ಈಗಿನ ಭವ್ಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈ ಕಟ್ಟಡವನ್ನು ಕಂಡ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟಿಮನಿಯವರು ಕಾಲೇಜಿನಂತಹ ಹೈಸ್ಕೂಲ ಎಂದು ಕರ್ಮವೀರ ವಾರ ಪತ್ರಿಕೆ ಅಂಕಣದಲ್ಲಿ ಬಣ್ಣಿಸಿದ್ದರು. ಮುಂದೆ ಬಂದ ಮುಖ್ಯೋಪಾಧ್ಯಾಯರು ಹಾಗೂ ಅನುಭವಿ ಶಿಕ್ಷಕರ ಪ್ರಯತ್ನಗಳಿಂದ ಶ್ರಿ ಗವಿಸಿದ್ಧೇಶ್ವರ ಪ್ರೌಢ ಶಾಲೆ, ವಿವಿಧೋದ್ಧೇಶ(ಒಣಟಣ ಕಣಡಿಠಿಠಜ)ಪ್ರೌಢಶಾಲೆಯಾಗಿ ಪರಿವರ್ತನೆಗೊಂಡಿದ್ದಲ್ಲದೇ, ಗುಲಬಗರ್ಾ ವಿಭಾಗದಲ್ಲಿ ಮೆರಿಟೋರಿಯಸ್ ವಿದ್ಯಾಥರ್ಿಗಳು ಕಲಿಯುವ ಶಾಲೆಯಾಗಿ ಗುರುತಿಸಲ್ಪಟ್ಟಿತು.

ಶ್ರೀ ಬಿ.ಸಿ.ಪಾಟೀಲ, ಶ್ರೀ ಬಿ.ಸಿ.ಹಿರೇಮಠ, ಶ್ರೀ ಎಸ್.ವಾಯ್.ಗುಮಗೋಳ. ಶ್ರೀ ಪಿ.ಜಿ.ಬಿದರಿಮಠ, ಶ್ರೀ .ಬಿ.ಎಂ. ಹನುಮನಾಳ, ಶ್ರೀ ಎಂ.ಎಸ್.ಸವದತ್ತಿ, ಶ್ರೀ ಡಿ.ಕೆ.ಕಾಶೀದ ಶ್ರೀ.ವಿ.ಜಿ.ಕೊತಬಾಳ, ಶ್ರೀ ಬಿ.ವ್ಹಿ.ರಾಮರೆಡ್ಡಿ, ಶ್ರೀ ಪಿ.ಡಿ.ಬಡಿಗೇರ, ಶ್ರೀ ವಿ.ಕೆ.ಜಾಗಟಗೇರಿ, ಶ್ರೀ ಎಸ್.ಸಿ.ಹಿರೇಮಠ ಶ್ರೀ ಜಿ.ವಿ.ಕೊಪ್ಪಳ, ಶ್ರೀ ಎನ್ ಹೆಚ್ ಪಾಟೀಲ್ ಮುಂತಾದ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾ ಈಗ ನಾನು ಮುಖ್ಯೋಪಾಧ್ಯಾಯನಾಗಿ ಶಿಕ್ಷಕರ ಅನುಭವ, ಕಾರ್ಯತತ್ಪರತೆ ಮತ್ತು ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಂದೇ ಕುಟುಂಬದವರಾಗಿ ಮುನ್ನಡೆಯುತ್ತಿದ್ದೇವೆ.

ಪರಮ ಪೂಜ್ಯ ಲಿಂಗೈಕ್ಯ ಜಗದ್ಗುರು ಶ್ರೀ ಶಿವಾಶಾಂತವೀರ ಮಹಾಸ್ವಾಮಿಗಳು ಹಾಗೂ ಶ್ರೀ ಗವಿಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಮ.ನಿ.ಪ್ರ. ಜಗದ್ಗುರು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕೃಪೆಯಿಂದ ಮುನ್ನಡೆದುಕೊಂಡು ಬಂದಿದೆ. ಶಾಲಾ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳ ಮೇಲೆ ಅವರ ಕೃಪಾಶೀವರ್ಾದ ಸದಾ ಇದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.

ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳು ನಮ್ಮ ಶಿಕ್ಷಕಬಂಧುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಕಾಲದಲ್ಲಿ ನಮಗೆ ಸಲಹೆ ಮಾರ್ಗದರ್ಶನ ಮಾಡುತ್ತಲಿದ್ದಾರೆ ಅವರಿಗೆ ನಾವು ಋಣಿಯಾಗಿದ್ದೇವೆ.

ಕಳೆದ 12ವರ್ಷಗಳಿಂದ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳಿಗೆ ಪ್ರತಿ ವಿಷಯದಲ್ಲಿ 5 ಪ್ರಶ್ನೆ ಪತ್ರಿಕೆಯನ್ನು ಬಿಡಿಸಿಕೊಂಡು ಬರಲು ತಿಳಿಸಿ, ಲೋಪದೋಷಗಳನ್ನು ಗುರುತಿಸಿ ತಿದ್ದುತ್ತ ಬಂದಿದ್ದೇವೆ. ಹಾಗೂ ವಾರಕ್ಕೆ 2 ದಿನ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳಿಗೆ ಕ್ವಿಜ್ ನಡೆಸಲಾಗುತ್ತಿದೆ. ಹಾಗೂ ಪ್ರತಿದಿನ ಶಿಕ್ಷಕರು ಪಾಳಿಯ ಪ್ರಕಾರ ಶ್ರೀ ಗವಿಸಿದ್ಧೇಶ್ವರ ವಸತಿ ನಿಲಯದಲ್ಲಿ ಬೆಳಿಗ್ಗೆ 5 ರಿಂದ 7 ಗಂಟೆಯವರೆಗೆ ಮಕ್ಕಳೊಂದಿಗೆ ಇದ್ದು ಮಾರ್ಗದರ್ಶನ ಮಾಡುತ್ತಾರೆ. ಬೆಳಿಗ್ಗೆ ವಿಶೇಷ ತರಗತಿ ನಡೆಸುತ್ತೇವೆ. ಇದರಿಂದ ಫಲಿತಾಂಶ ಸುಧಾರಣೆ ಕಂಡಿದೆ. ಪ್ರತಿ ವರ್ಷ ಫಲಿತಾಂಶ ಹೆಚ್ಚುತ್ತಲಿದೆ 4 ಕಿರು ಪರೀಕ್ಷೇಗಳನ್ನು ನಡೆಸಿದ್ದಲ್ಲದೇ 4 ಸರಣಿ ಪರೀಕ್ಷೆ ಕೂಡ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾಥರ್ಿಗಳಿಗಾಗಿ ಗುಂಪುಗಳನ್ನು ರಚಿಸಿ ಗುಂಪು ಅಧ್ಯಯನ ನಡೆಸಿ ಮಾರ್ಗದಶರ್ಿ ಶಿಕ್ಷಕರನ್ನು ನೇಮಿಸಿ, ದತ್ತು ಯೋಜನೆಯನ್ನು ಪ್ರಾರಂಭಿಸಿದ್ದೇವೆ.

ನಮ್ಮ ಶಾಲೆಯಲ್ಲಿ ಸುಸಜ್ಜಿತವಾದ ಗಣಿತ,ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಕೋಠಡಿ/ಪ್ರಯೋಗಾಲಯವಿದ್ದು ವಿದ್ಯಾಥರ್ಿಗಳು ಪ್ರಯೋಗದಲ್ಲಿ ತೊಡಗಲು ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವಿಜ್ಞಾನ ನಾಟಕ ಸ್ಪಧರ್ೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ನಮ್ಮ ವಿದ್ಯಾಥರ್ಿಗಳು ಬಹುಮಾನ ಪಡೆದಿರುತ್ತಾರೆ.

ವಾಚನಾಲಯದಿಂದ ವಿದ್ಯಾಥರ್ಿಗಳು ಪುಸ್ತಕ ಪಡೆದುಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟ ಭೂಪಟಗಳು ನಮ್ಮ ಶಾಲೆಯಲ್ಲಿವೆ. ರಾಷ್ಟೀಯ ಹಬ್ಬಗಳ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪಧರ್ೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಗುತ್ತ್ತಿದೆ. ಹಿಂದಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಿರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಗುತ್ತದೆ.
ವಿದ್ಯಾಥರ್ಿಗಳು ಪ್ರತಿಭಾಕಾರಂಜಿ ಯೋಗ ಸ್ಪಧರ್ೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದಾರೆ, ಪ್ರಾಥಮಿಕ ವಿಭಾಗದಲ್ಲಿ ಶಾಟಪುಟ್, ಚಕ್ರಎಸೆತದಲ್ಲಿ ಜಿಲ್ಲಾ ಮಟ್ಟದ ಸ್ಪಧರ್ೆಯಲ್ಲಿ ಭಾಗವಹಿಸಿದ್ದಾರೆ. ಇದಲ್ಲದೇ ಸ್ಥಳೀಯ ಶಾಲಾ ಕಾಲೇಜು, ಸಂಘ ಸಂಸ್ಥೆಗಳು ನಡೆಸುವ ವಿವಿಧ ಸ್ಪಧರ್ೆಗಳಲ್ಲಿ ನಮ್ಮ ಶಾಲೆಯ ವಿದ್ಯಾಥರ್ಿಗಳು ಬಹುಮಾನ ಪಡೆದಿದ್ದಾರೆ.

ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಇದೆ,8ನೇ ತರಗತಿ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಲಾಗುತ್ತದೆ, ಪ್ರತಿವರ್ಷ 5 ರಿಂದ 10 ನೇ ತರಗತಿ ವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಘುವದು. ಶಾಲೆಯ ಪ್ರತಿ ತರಗತಿಯಲ್ಲಿ ಹೆಚ್ಛು ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಪುರಸ್ಕಾರಗಳನ್ನು ವಿತರಿಸಿ ಎಲ್ಲಾ ವಿದ್ಯಾಥರ್ಿಗಳಲ್ಲಿ ಸ್ಪಧರ್ಾತ್ಮಕ ಮನೋಭಾವನೆ ಬೆಳೆಯುವಂತೆ ಮಾಡುವದು.

ನಮ್ಮ ಶಾಲೆಯ ಎಲ್ಲಾ ವಿದ್ಯಾಥರ್ಿಗಳಿಗೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದ್ದು.ಓಖಿಖಇ & ಓಒಒಖಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್ಶಿಪ ಪಡೆದಿದ್ದಾರೆ. ನಮ್ಮ ಶಾಲೆಯಲ್ಲಿ16ವರ್ಗಗಳಿದ್ದು 1550ವಿದ್ಯಾಥರ್ಿಗಳು ಇಂದು ಅಭ್ಯಾಸ ಮಾಡುತ್ತಿದ್ದಾರೆ.ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾಥರ್ಿಗಳು ರಾಜ್ಯ ಹೊರರಾಜ್ಯ ಮತ್ತು ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಹಾಗೂಂಖ, ಏಂಖ, ಏಖಕ, ಏಇಖಅಧಿಕಾರಿಗಳಾಗಿದ್ದಾರೆ. ಚಿತ್ರಕಲಾವಿದರಾಗಿ, ಸಾಹಿತಿಗಳಾಗಿ, ಕವಿ, ಲೇಖಕ, ಪತ್ರಕರ್ತರಾಗಿ, ಅಭಿಯಂತರರಾಗಿ, ಕೃಷಿಕರಾಗಿ, ರಾಜಕಾರಣಿಗಳಾಗಿ, ವೈದ್ಯರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ ವಿಜ್ಞಾನಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಅನೇಕ ಮಠಗಳಿಗೆ ಪೀಠಾಧಿಪತಿಗಳಾಗಿದ್ದಾರೆ. ಇದು ನಮ್ಮ ಶಾಲೆಯ ಗೌರವಾದರಗಳಿಗೆ ಗರಿ ಮೂಡಿಸಿದೆ.

ನಮ್ಮ ಶಾಲೆಯಲ್ಲಿ ಓಅಅ,ಸ್ಕೌಟ್ಸ್, ಸೇವಾದಳ ವಿಭಾಗಗಳಿದ್ದು, ಅಗಸ್ಟ್ 15, ಸಪ್ಟೆಂಬರ 17, ಜನೇವರಿ26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪರೇಡನಲ್ಲಿ ಭಾಗವಹಿಸಿದ್ದಾರೆೆ. ನಮ್ಮಓ.ಅ.ಅ.ವಿಭಾಗದ ಕೆಡಿಟ್ಗಳು ಬಳ್ಳಾರಿಯ ತೋರಣಗಲ್ಲುಅಂಖಿಅಕ್ಯಾಂಪ್ನಲ್ಲಿ ಭಾಗವಹಿಸಿ ಪರೇಡನಲ್ಲಿ ಗೋಲ್ಡ್ ಮೇಡಲ್ ಪಡೆದುಕೊಂಡಿದ್ದಾರೆ ಹಾಗೂ ಮೈಸೂರಿನಲ್ಲಿ ಜರುಗಿದ ಖಆಅ.ಕ್ಯಾಂಪ್ನಲ್ಲಿ ನಾಲ್ಕು ಕೆಡಿಟ್ ಭಾಗವಹಿಸಿರುತ್ತಾರೆ.ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರ ಸಂಘವಿದೆ. ವಿದ್ಯಾಥರ್ಿಗಳಿಗಾಗಿ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲಾ ವಿದ್ಯಾಥರ್ಿಗಳ ಪತ್ತಿನ ಸಹಕಾರ ಸಂಘವಿದೆ. ಕಳೆದ 10 ವರ್ಷಗಳಿಂದ ಗವಿಬೆಳಕು ಶಾಲಾ ಪತ್ರಿಕೆ ಪ್ರಕಟಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತ್ತಿದೆ.

ನಮ್ಮ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಶ್ರೇಣಿ ಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಸ್ಥಿರನಿಧಿ ಠೇವಣಿ ಇಟ್ಟ ಮಹನೀಯರು.
1. ಷ.ಬ್ರ.ಶ್ರೀ ನಾಗಭೂಷಣ ಶಿವಾಚಾರ್ಯರು, ಹೆಬ್ಬಾಳ ಸ್ಥಿರ ನಿಧಿ ಠೇವಣಿ
2. ಶ್ರೀ ಎಸ್.ಮಲ್ಲಿಕಾಜರ್ುನ ತಂದೆಯವರ ಸ್ಮರಣಾರ್ಥ
3. ಶ್ರೀ ಎಸ್. ಆರ್. ನವಲಿಹಿರೇಮಠತಂದೆಯವರ ಸ್ಮರಣಾರ್ಥ
4. ಶ್ರೀ ಟಿ.ವ್ಹಿ.ಮಾಗಳದ, ತಾಯಿಯವರ ಸ್ಮರಣಾರ್ಥ
5. ಶ್ರೀ ಡಾ|| ಬಿ.ವ್ಹಿ.ಶಿರೂರ್.ತಂದೆಯವರ ಸ್ಮರಣಾರ್ಥ
6. ಶ್ರೀ ಚನ್ನಪ್ಪನವರು ನಿಡಶೇಶಿ ತಾಯಿಯವರ ಸ್ಮರಣಾರ್ಥ
7. ಶ್ರೀ ಶರಣಬಸರಾಜ ಬಿಸರಳ್ಳಿ ತಂದೆಯವರ ಸ್ಮರಣಾರ್ಥ
8. ಶ್ರೀ ಉಮೇಶ ಪೂಜಾರ ತಂದೆಯವರ ಸ್ಮರಣಾರ್ಥ
9. ಶ್ರೀ ಎಸ್.ಸಿ.ಹಿರೇಮಠ, ತಂದೆಯವರ ಸ್ಮರಣಾರ್ಥ
10. ಶ್ರೀಮತಿ ಪುಷ್ಪಾ ಪಿ.ನಿಲೂಗಲ್ ಪತಿಯ ಸ್ಮರಣಾರ್ಥ
11. ಶ್ರೀ ಶ್ರೀನಿವಾಸ ಕುಲಕಣರ್ಿಯವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ
12. ಶ್ರೀ ಸಿ. ಬಿ. ಪಾಟೀಲ್ ತಂದೆಯವರ ಸ್ಮರಣಾರ್ಥ
13. ಶ್ರೀ ಮಲ್ಲೇಶಪ್ಪ ಹೊರಪೇಟೆ ತಾಯಿಯವರ ಸ್ಮರಣಾರ್ಥ
14. ಶ್ರೀ ಎನ್. ಎಚ್. ಪಾಟೀಲ ತಾಯಿಯವರ ಸ್ಮರಣಾರ್ಥ
15. ಶ್ರೀ ಎಂ.ಎಸ್.ಶೆಟ್ಟರ್ ತಾಯಿಯವರ ಸ್ಮರಣಾರ್ಥ
16. ಶ್ರೀ ರವಿ ನಾಮದೇವ ರಂಜಣಗಿ ತಂದೆಯವರ ಸ್ಮರಣಾರ್ಥ
17. ಶ್ರೀ ಶ್ರೀನಿವಾಸ.ರು.ವೀರಾಪೂರ ಅಜ್ಜಿಯವರ ಸ್ಮರಣಾರ್ಥ
18. ಶ್ರೀ ಕಲ್ಲನಗೌಡ ದೊಡ್ಡಮನಿ ತಂದೆಯವರ ಸ್ಮರಣಾರ್ಥ
19. ಶ್ರೀ ಶಶಿಧರ.ವಿ.ಕೊತಬಾಳ ತಂದೆಯವರ ಸ್ಮರಣಾರ್ಥ
20. ಶ್ರೀ ಎಂ ಎನ್ ಕಮ್ಮಾರ್ರವರುತಂದೆಯವರ ಸ್ಮರಣಾರ್ಥ

ಅಂದು ಹಚ್ಚಿದ ಜ್ಞಾನದ ಬೆಳಕಿನಲ್ಲಿ ಸಹಸ್ರ ಸಹಸ್ರ ವಿದ್ಯಾಥರ್ಿಗಳು ವ್ಯಾಸಂಗ ಮಾಡಿ ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ. ಕೊಪ್ಪಳ ನಾಡಿನ ಹೆಮ್ಮೆಯ ಸಂಸ್ಥೆಯಾಗಿ ಜ್ಞಾನದಾಸೋಹದೊಂದಿಗೆ ಮುನ್ನಡೆಯುತ್ತಲಿದೆ ಎಂದು ತಿಳಿಸುತ್ತಾ ವರದಿ ವಾಚನಕ್ಕೆ ಮಂಗಳ ಹಾಡುತ್ತೇವೆ.

X