ಶಾಲೆಯ ಧ್ಯೇಯ ವಾಕ್ಯ.

“ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣದ ಗುರಿ”

ಸತತ ಪರಿಶ್ರಮ ಮತ್ತು ಸ್ವಶಕ್ತಿಯಿಂದ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಭಾವಿ ಪ್ರಜೆಗಳ ನಿಮರ್ಾಣಕ್ಕಾಗಿ ಎಲ್ಲಾ ಭಾಗಿದಾರರ ಸಹಯೋಗದೊಂದಿಗೆ ಸಮುದಾಯದ ಅಪೇಕ್ಷಿತ ಮಟ್ಟದ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಶಾಲೆಯ ಸಂಕಲ್ಪವಾಗಿದೆ. ಇದರೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ತಲುಪುವುದು ಎಲ್ಲರ ಶ್ರಮ ಮತ್ತು ಭಾಗವಹಿಸುವಿಕೆಯ ಗುರಿಯಾಗಿದೆ. ಇದನ್ನು ಸಾಧಿಸಬಯಸುತ್ತೇವೆ.

ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ, ಕೊಪ್ಪಳ

ಶ್ರೀ ಗುರುವೆ ಸತ್ ಕ್ರಿಯಾಗರವೇ ಸುಜ್ಞಾನ ಸಾಗರವೇ ಎನ್ನ ಮತಿಗೆ ಮಂಗಳವಿತ್ತು ರಾಗದಿಂ ಬೇಗ ಕೃಪೆಯಾಗು.ದಯಾ ಘನನಾದ ಕೊಪ್ಪಳ ನಾಡಿನ ಆದಿದೇವತೆ ಶ್ರೀ ಗವಿಸಿದ್ಧೇಶ್ವರನನ್ನು ಸ್ಮರಿಸಿಕೊಂಡು ಪರಮ ಪೂಜ್ಯ ಮನ್ ನಿರಂಜನ ಜಗದ್ಗುರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಪಾದಗಳಲ್ಲಿ ನಮಸ್ಕರಿಸಿ ಈ ಪ್ರೌಢ ಶಾಲೆ ಜೂನ್-16 1951 ರಲ್ಲಿ ಶ್ರೀ ಮನ್ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಸತ್ ಸಂಕಲ್ಪ ಹಾಗೂ ಕೃಪಾಶೀವರ್ಾದದಿಂದ ಪ್ರಾರಂಭಗೊಂಡಿತು.

ಈ ಭಾಗದಲ್ಲಿ ಆಗ ಅಕ್ಷರ ಜ್ಞಾನ ಉಳ್ಳವರು ತುಂಬ ಕಡಿಮೆ ಎಲ್ಲಿಯೂ ಸರಕಾರಿ ಶಾಲೆಗಳಿರಲಿಲ್ಲ. ಊರಿನಲ್ಲಿ ಅಯ್ಯನವರು ನಡೆಸುತ್ತಿದ್ದ ಗಾವಠಿ ಶಾಲೆಗಳೇ ಆಧಾರವಾಗಿದ್ದವು. ಕೆಲವೊಂದು ಕಡೆಗೆ ಅವು ಇಲ್ಲದೆ ಒಂದು ಊರಿಗೆ ಬಂದ ಪತ್ರವನ್ನು ಓದಿಸಲು ಇನ್ನೊಂದು ಊರಿಗೆ ಹೋಗಬೇಕಾಗಿತ್ತು.ಇಂತಹ ಅಕ್ಷರಬರದ ನಾಡಿನಲ್ಲಿ ವಿದ್ಯೆಯ ಪ್ರಸಾರಕ್ಕೆ ಶ್ರೀ ಗವಿಸಿದ್ಧೇಶ್ವರ ಮಿಡ್ಲ ಸ್ಕೂಲ್ ಆರಂಭಗೊಂಡಿದ್ದು ಶ್ರೀ ಗವಿಸಿದ್ಧೇಶ್ವರನ ಆಶೀವರ್ಾದವೇ ಕಾರಣ.

ಸೌಲಭ್ಯಗಳು

ಪ್ರೋಜೆಕ್ಟರ್ ಬಳಸಿ ಪಾಠಬೋಧನೆ

ಕಂಪ್ಯೂಟರ್ ಲ್ಯಾಬ್

ಸುಸಜ್ಜಿತ ಗ್ರಂಥಾಲಯ

ಫೋಟೋ ಗ್ಯಾಲರಿ

X